ಅಂತಾರಾಷ್ಟ್ರೀಯ ಬ್ಯಾಂಕ್‌ ಖಾತೆ ಸಂಖ್ಯೆ (ಐಬಿಎಎನ್‌) ಎಂಬುದು ದೇಶಗಳ ಗಡಿಗಳಾಚೆ ಇರುವ ಬ್ಯಾಂಕ್‌ ಖಾತೆ ಗಳನ್ನು ಕನಿಷ್ಠ (ನಕಲಿನ) ಪ್ರತಿಲಿಪಿ ಲೋಪ-ದೋಷಗಳನ್ನು ಪತ್ತೆಹಚ್ಚಿ,ಗುರುತಿಸುವ ಅಂತಾರಾಷ್ಟ್ರೀಯ ಪ್ರಮಾಣವಾಗಿದೆ. ಇದನ್ನು ಮೂಲತಃ ಯುರೋಪಿಯನ್‌ ಬ್ಯಾಂಕಿಂಗ್‌ ಪ್ರಮಾಣಕ ಸಮಿತಿ ಆಯ್ದುಕೊಂಡಿತ್ತು. ಆನಂತರ ಇದನ್ನು ಐಎಸ್‌ಒ 13616:1997 ಅಡಿ ಅಂತಾರಾಷ್ಟ್ರೀಯ ಪ್ರಮಾಣಕವಾಗಿ ಹಾಗೂ ಇಂದು ಐಎಸ್‌ಒ 13616-1:2007 ಅಡಿ ಪ್ರಮಾಣಕವಾಗಿ ಆಯ್ದುಕೊಳ್ಳಲಾಗಿದೆ. 13616-2:2007 ಅಡಿ ಸ್ವಿಫ್ಟ್‌ () ಎಂಬುದು ಅಧಿಕೃತ ಐಬಿಎಎನ್‌ ದಾಖಲಾತಿ ಪ್ರಾಧಿಕಾರವಾಗಿದೆ. ಐಬಿಎಎನ್‌ನ್ನು ಮೂಲತಃ ಯುರೋಪಿಯನ್‌ ಒಕ್ಕೂಟದ ಸರಹದ್ದಿನೊಳಗೆ ಹಣದ ಸುಲಭ ಪಾವತಿಗಾಗಿ ಅಭಿವೃದ್ಧಿಗೊಳಿಸಲಾಯಿತು. ಆದರೆ, ಈ ವ್ಯವಸ್ಥೆಯು ವಿಶ್ವದಾದ್ಯಂತ ಬಳಸುವಷ್ಟು ಹೊಂದಿಕೊಳ್ಳುವಂತಹ ವ್ಯವಸ್ಥೆಯಾಗಿದೆ. ಐಬಿಎಎನ್‌ನಲ್ಲಿ ಐಎಸ್‌ಒ 3166-1 ಆಲ್ಫಾ-2 ದೇಶದ ಸಂಕೇತ, ನಂತರ ಎರಡು ಪರಿಶೀಲನಾ ಅಂಕಿಗಳು (ಇವನ್ನು -97 ತಂತ್ರದ ಮೂಲಕ ಗಣಿಸಿ ನಿರ್ಣಯಿಸಲಾಗುವುದು.) ಅಲ್ಲದೇ ಮೂಲಭೂತ ಬ್ಯಾಂಕ್‌ ಖಾತೆ ಸಂಖ್ಯೆ (ಬಿಬಿಎಎನ್‌) ಇದರಲ್ಲಿ ಗರಿಷ್ಠ ಮೂವತ್ತು ಅಕ್ಷರ-ಅಂಕಿಗಳ ಮಿಶ್ರಿತ-ಸಂಕೇತವಾಗಿದೆ. ಬಿಬಿಎಎನ್‌ನಲ್ಲಿ ದೇಶೀಯ ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಸಂಬಂಧಿತ ಮಾಹಿತಿಯನ್ನು ಹೊಂದಿರುವುದು. ತಮ್ಮ-ತಮ್ಮ ದೇಶಗಳಲ್ಲಿ ಎಲ್ಲಾ ಬಿಬಿಎಎನ್‌ ಸಂಖ್ಯೆಗಳು ಎಷ್ಟು ಅಂಕಿಗಳನ್ನು ಹೊಂದಿರಬೇಕೆಂಬ ಬಗ್ಗೆ, ರಾಷ್ಟ್ರೀಯ ಬ್ಯಾಂಕಿಂಗ್‌ ಸಮುದಾಯಗಳು ತಾವೇ ಪ್ರತ್ಯೇಕವಾಗಿ ನಿರ್ಣಯಿಸುವವು. == ಹಿನ್ನೆಲೆ == ಐಬಿಎಎನ್‌ ವ್ಯವಸ್ಥೆ ಜಾರಿಗೆ ಬರುವ ಮುಂಚೆ, ಬ್ಯಾಂಕ್‌, ಬ್ಯಾಂಕ್‌ ಶಾಖೆ, ಹಣ ರವಾನಾ ಸಂಕೇತಗಳು ( ) ಹಾಗೂ ಖಾತೆ ಸಂಖ್ಯೆ ವಿಚಾರಗಳಲ್ಲಿ ವ್ಯತ್ಯಾಸಗೊಳ್ಳುತ್ತಿರುವ ರಾಷ್ಟ್ರೀಯ ನಿಯಮಗಳ ಕುರಿತು, ಗ್ರಾಹಕರು, ಅದರಲ್ಲೂ ವಿಶಿಷ್ಟವಾಗಿ ವ್ಯಕ್ತಿಗಳು ಮತ್ತು ಸಣ್ಣ ಪ್ರಮಾಣ ಉದ್ದಿಮೆದಾರರು (ಎಸ್‌ಎಂಇಗಳು) ಬಹಳ ಗೊಂದಲಕ್ಕೊಳಗಾಗುತ್ತಿದ್ದರು. ಇದರಿಂದಾಗಿ, ಪಾವತಿಗಳಿಗೆ ಸಂಬಂಧಿತ ಎಲ್ಲಾ ಅಗತ್ಯ ಹಣ ರವಾನಾ ಮಾಹಿತಿಗಳು ಕಾಣೆಯಾಗುವ ಸಮಸ್ಯೆಗಳುಂಟಾದವು. ಇನ್ನೂ ಹೆಚ್ಚಿಗೆ, ಐಎಸ್‌ಒ 9362 ಸೂಚಿಸಿರುವಂತೆ, ಹಣ ರವಾನಾ ಮಾಹಿತಿಯು ಪರಿಶೀಲನಾ ಅಂಕಿಗಳನ್ನು (ಪರಿಶೀಲನಾ ಅಂಕಿಗಳು) ಹೊಂದಿರುತ್ತಿರಲಿಲ್ಲ. ಇದರಿಂದಾಗಿ ಪ್ರತಿಲಿಪಿ ದೋಷಗಳು ಪತ್ತೆಯಾಗುತ್ತಿರಲಿಲ್ಲ. ಹಣ ಕಳುಹಿಸುತ್ತಿರುವ ಬ್ಯಾಂಕ್‌ ತಾನು ಪಾವತಿ ಮಾಡುವ ಮುಂಚೆ ಹಣ ರವಾನಾ ಮಾಹಿತಿಯನ್ನು ಊರ್ಜಿತಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಹಣ ರವಾನಾ ದೋಷಗಳು ಪದೇ-ಪದೇ ಸಂಭವಿಸುತ್ತಿದ್ದ ಕಾರಣ, ಪಾವತಿಗಳು ವಿಳಂಬವಾದವು. ಹಣ ಕಳುಹಿಸುವ ಮತ್ತು ಸ್ವೀಕರಿಸುವ ಬ್ಯಾಂಕ್‌ಗಳಿಗೆ, ಹಾಗೂ ಕೆಲವೊಮ್ಮೆ ಹಣ ರವಾನೆಯ ಕಾರ್ಯದಲ್ಲಿ ತೊಡಗಿರುವ ಮಧ್ಯವರ್ತಿ ಬ್ಯಾಂಕ್‌ಗಳಿಗೂ ಸಹ ಹೆಚ್ಚುವರಿ ವೆಚ್ಚ ತಗಲುತ್ತಿತ್ತು. ಖಾತೆ ಗುರುತಿಸಲು ಸೂಕ್ತವಾಗಿರುವಂತಹ ಕಾಯಂ, ಆದರೂ ಹೊಂದಿಕೊಳ್ಳುವ ವ್ಯವಸ್ಥೆಯನ್ನು ಐಬಿಎಎನ್‌ ಜಾರಿಗೊಳಿಸುವುದು. ಈ ವ್ಯವಸ್ಥೆಯಲ್ಲಿ ಪ್ರತಿಲಿಪಿ (ನಕಲು) ದೋಷಗಳನ್ನು ತಡೆಗಟ್ಟಲು ಅಗತ್ಯವಾದ ಊರ್ಜಿತಗೊಳಿಸುವಿಕೆಯ ಮಾಹಿತಿ ಹೊಂದಿರುತ್ತದೆ. ಈಗ ಎಲ್ಲಾದರೂ ಸರಿ, ಒಂದು ಬ್ಯಾಂಕ್‌ನಿಂದ ಇನ್ನೊಂದಕ್ಕೆ ಹಣ ರವಾನಿಸಲು ಅಗತ್ಯವಾದ ಎಲ್ಲಾ ರವಾನಾ ಮಾಹಿತಿಯನ್ನು ಪ್ರಮಾಣಿತ ಮಟ್ಟದ ಐಬಿಎಎನ್‌ ಹೊಂದಿರುತ್ತದೆ. ಐಬಿಎಎನ್‌ ಪರಿಶೀಲನಾ ಅಂಕಿಗಳನ್ನು ಹೊಂದಿರುತ್ತದೆ. ಈ ಪರಿಶೀಲನಾ ಅಂಕಿಗಳನ್ನು ಏಕೈಕ ಪ್ರಮಾಣಿತ ವಿಧಾನದ ಪ್ರಕಾರ ಯಾವುದೇ ದೇಶದಲ್ಲಿ ಊರ್ಜಿತಗೊಳಿಸಬಹುದಾಗಿದೆ. ಇದರಲ್ಲಿ ಬ್ಯಾಂಕ್‌ ಗುರುತಿನ ಸಂಖ್ಯೆಗಳು, ಬ್ಯಾಂಕ್‌ ಶಾಖಾ ಸಂಖ್ಯೆಗಳು (ಇವನ್ನು ಯುನೈಟೆಡ್ ಕಿಂಗ್ಡಮ್‌ ಮತ್ತು ಐರ್ಲೆಂಡ್‌ ದೇಶಗಳಲ್ಲಿ ವಿಂಗಡಣಾ ಸಂಕೇತ ( ) (ಸಂಕ್ಷಿಪ್ತ ಅಂಕಿಗಳು)ಎನ್ನಲಾಗಿದೆ) ಹಾಗೂ ಖಾತೆ ಸಂಖ್ಯೆ ಸೇರಿದಂತೆ, ಬ್ಯಾಂಕ್‌ ಖಾತೆಯ ಬಗೆಗಿನ ಎಲ್ಲಾ ಪ್ರಮುಖ ಮಾಹಿತಿ ಹೊಂದಿರುತ್ತದೆ. ಇದನ್ನು ಬಳಸಿದೆಲ್ಲೆಡೆ, ಐಬಿಎಎನ್‌ಗಳು ಒಟ್ಟು ಅಂತಾರಾಷ್ಟ್ರೀಯ ಹಣ ರವಾನೆಗಳಲ್ಲಿ ದೋಷಗಳನ್ನು 0.1%ಕ್ಕಿಂತಲೂ ಕಡಿಮೆಗೊಳಿಸಿದೆ. ಹಣ ಕಳುಹಿಸುತ್ತಿರುವ ಬ್ಯಾಂಕ್‌ ಅಥವಾ ಅದರ ಗ್ರಾಹಕರು ರವಾನೆಯಾಗಬೇಕಾಗಿರುವ ಖಾತೆಯ ಊರ್ಜಿತಗೊಳಿಸುವಿಕೆಯ ಹಾಗೂ ಖಾತೆ ಸಂಖ್ಯೆಯ ಮಾಹಿತಿಯನ್ನು ಕಂಪ್ಯೂಟರ್‌ಗೆ ಸೇರಿಸುವಾಗಲೇ ಪರಿಶೀಲಿಸಿಸಬಹುದು. ಇದರಿಂದಾಗಿ, ಹಣ ರವಾನೆ ಮತ್ತು ಖಾತೆ ಸಂಖ್ಯೆ ದೋಷಗಳನ್ನು ಬಹುತೇಕ ಸಂಪೂರ್ಣವಾಗಿ ತಡೆಗಟ್ಟಬಹುದು. ವಿದ್ಯುನ್ಮಾನ ರೀತ್ಯಾ ರವಾನಿಸುವಾಗ ಐಬಿಎಎನ್‌ ತನ್ನ ಅಂಕಿಅಂಶಗಳ ನಡುವೆ ಯಾವುದೇ ಖಾಲಿ ಸ್ಥಳವಿರಬಾರದು. ಆದರೂ, ಕಾಗದದಲ್ಲಿ ಮುದ್ರಿಸಿದಾಗ, ಐಬಿಎಎನ್‌ನ್ನು ನಾಲ್ಕು ಅಕ್ಷರಗಳ ಗುಂಪುಗಳಲ್ಲಿದ್ದು, ಮಧ್ಯದಲ್ಲಿ ಒಂದು ಅಕ್ಷರದಷ್ಟು ಅಂತರ ಹೊಂದಿರುತ್ತವೆ. ಇದರಲ್ಲಿ ಕೊನೆಯ ಗುಂಪು ವ್ಯತ್ಯಾಸವಾಗಬಲ್ಲ ಅಂಕಿಗಳ ಸಂಖ್ಯೆ ಹೊಂದಿರುತ್ತದೆ. ಇದರ ಉದಾಹರಣೆಯನ್ನು ಕೆಳಗೆ ನೀಡಲಾಗಿದೆ. ಐಬಿಎಎನ್‌ನಲ್ಲಿ ಬಳಸಬಹುದಾದ ಅಂಕಿಗಳು ಹಿಂದೂ-ಆರಬಿಕ್‌ ಅಂಕಿಗಳು ‘0’ಯಿಂದ ‘9’ ವರೆಗೆ ಹಾಗೂ ಲ್ಯಾಟೀನ್‌ ಅಕ್ಷರಗಳಾದ ಇಂದ ವರೆಗಿನ ದೊಡ್ಡ ಅಕ್ಷರಗಳಾಗಿವೆ. ತಮ್ಮ ರಾಷ್ಟ್ರೀಯ ಭಾಷೆಗಳಲ್ಲಿ ಇಂತಹ ಅಕ್ಷರಗಳು-ಅಂಕಿಗಳನ್ನು ಬಳಸದಿರುವ ಗ್ರೀಸ್‌, ಸೌದಿ ಅರಬಿಯಾ ಮತ್ತು ಇಸ್ರೇಲ್‌ನಂತಹ ದೇಶಗಳಲ್ಲೂ ಇದು ಅನ್ವಯಿಸುತ್ತದೆ. == ಭೌಗೋಳಿಕ ಬಳಕೆ == ರಷ್ಯಾ, ಬೆಲರೂಸ್‌, ಉಕ್ರೇನ್‌, ಅರ್ಮೇನಿಯಾ ಮತ್ತು ಅಜರ್ಬೇಜಾನ್ ಹೊರತುಪಡಿಸಿ ಯುರೋಪ್‌ನ ಎಲ್ಲಾ ಬ್ಯಾಂಕ್‌ಗಳು ತಮ್ಮ ಖಾತೆಗಳಿಗಾಗಿ ಐಬಿಎಎನ್‌ ಗುರುತಿಸುವ ಸಾಧನ ಹಾಗೂ ರಾಷ್ಟ್ರೀಯವಾಗಿ ಅಂಕಿ-ಅಂಶಗಳ ಪತ್ತೆ ಮಾಡುವ ಸಾಧನವನ್ನೂ ಒದಗಿಸುತ್ತವೆ. ಈ ವ್ಯವಸ್ಥೆಯು ಯುರೋಪಿಯನ್‌ ಆರ್ಥಿಕ ವಲಯದಲ್ಲಿ ಕಡ್ಡಾಯವಾಗಿದೆ. ಜೊತೆಗೆ, ಇಸ್ರೇಲ್‌, ಕಝಕ್‌ಸ್ಥಾನ್‌, ಲೆಬನಾನ್‌, ಮೌರಿಟಾನಿಯಾ, ಮಾರಿಷಸ್‌, ಸೌದಿ ಅರಬಿಯಾ, ಟುನಿಷಿಯಾ ಹಾಗೂ ತುರ್ಕಿ ರಾಷ್ಟ್ರಗಳಲ್ಲಿಯೂ ಸಹ ಐಬಿಎಎನ್‌ ವ್ಯವಸ್ಥೆಯ ಖಾತೆ ಗುರುತಿಸುವ ಸಾಧನ ಒದಗಿಸುತ್ತವೆ. ಜಿಬ್ರಾಲ್ಟಾರ್‌ ಮತ್ತು ರಾಜಪ್ರಭುತ್ವದ ಆಳ್ವಿಕೆಯಲ್ಲಿರುವ ರಾಷ್ಟ್ರಗಳ ಹೊರತುಪಡಿಸಿ, ಉಳಿದ ಬ್ರಿಟಿಷ್‌ ಆಳ್ವಿಕೆಗೆ ಸೇರಿದ ರಾಷ್ಟ್ರಗಳ ಬ್ಯಾಂಕ್‌ಗಳಲ್ಲಿ ಐಬಿಎಎನ್‌ ವ್ಯವಸ್ಥೆಯನ್ನು ಬಳಸಲಾಗುವುದಿಲ್ಲ. ಡಚ್‌ ಆಳ್ವಿಕೆಯ ವೆಸ್ಟ್‌ ಇಂಡೀಸ್‌ ವಲಯದಲ್ಲಿರುವ ಬ್ಯಾಂಕ್‌ಗಳೂ ಸಹ ಐಬಿಎಎನ್‌ ವ್ಯವಸ್ಥೆಯನ್ನು ಬಳಸುವುದಿಲ್ಲ. ಯುರೋಪ್‌ ಖಂಡದ ಆಚೆಯಿರುವ ಕೆಲವು ಬ್ಯಾಂಕ್‌ಗಳು ಐಬಿಎಎನ್‌ಗೆ ಮಾನ್ಯತೆ ನೀಡಲಾರವು, ಆದರೂ ಕಾಲಾನಂತರದಲ್ಲಿ ಮಾನ್ಯತೆ ನೀಡುವ ಸಾಧ್ಯತೆಗಳೂ ಉಂಟು. ಅವು ವಿದೇಶಿ ಬ್ಯಾಂಕ್‌ ಖಾತೆ ಸಂಖ್ಯೆಗಳಂತೆಯೇ ಐಬಿಎಎನ್‌ಗಳನ್ನು ಪರಿಗಣಿಸದಿರಬಹುದು. ಆದರೂ, ಯುರೋಪ್‌ ಗಡಿಯಾಚೆಗಿನ ಬ್ಯಾಂಕ್‌ಗಳು ಯುರೋಪ್‌ನಲ್ಲಿರುವ ಖಾತೆಗಳಿಗೆ ಐಬಿಎಎನ್‌ಗಳನ್ನು ಖಾತೆ ಸಂಖ್ಯೆಗಳ ರೂಪದಲ್ಲಿ ಸ್ವೀಕರಿಸುವವು. ವಿಶಿಷ್ಟವಾಗಿ ಅವು ಹಣ ಪಾವತಿ ಸೂಚನೆ ನೀಡುವ ಮುಂಚೆ ಐಬಿಎಎನ್‌ ಸಿಂಧುವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದಿರಬಹುದು. ಐಬಿಎಎನ್‌ ಅನುಪಸ್ಥಿತಿಯಲ್ಲಿ, ಸದ್ಯದ ಐಎಸ್‌ಒ 9362 ಬ್ಯಾಂಕ್‌ ಗುರುತಿಸುವ ಸಾಧನಾ ಸಂಕೇತ ವ್ಯವಸ್ಥೆಯನ್ನು ಬಳಸುವುದು ಅಗತ್ಯವಾಗಿದೆ. (ಬಿಐಸಿ ಅಥವಾ ಸ್ವಿಫ್ಟ್‌ ಸಂಕೇತ) ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಬ್ಯಾಂಕ್‌ಗಳು ಐಬಿಎಎನ್‌ ವ್ಯವಸ್ಥೆಯ ಖಾತೆ ಸಂಖ್ಯೆಗಳನ್ನು ಒದಗಿಸುವುದಿಲ್ಲ. ಈ ದೇಶದ ಬ್ಯಾಂಕ್‌ಗಳು ಐಬಿಎಎನ್‌ ಪ್ರಮಾಣಗಳ ಯಾವುದೇ ಆಯ್ಕೆಯನ್ನು ಎಎನ್‌ಎಸ್‌ಐ ಎಎಸ್‌ಸಿ ಎಕ್ಸ್‌9 ಎನ್ನಲಾದ ಅಮೆರಿಕಾ ಸಂಯುಕ್ತ ಸಂಸ್ಥಾನದ ಹಣಕಾಸು ಸೇವಾ ಪ್ರಮಾಣ ಅಭಿವೃದ್ಧಿ ಸಂಘಟಣೆ ಚಾಲಿತಗೊಳಿಸಬೇಕಾಗುವುದು. ಆದರೆ ಇದುವರೆಗೂ ಮಾಡಿಲ್ಲ. ಆದ್ದರಿಂದ, ಅಮೆರಿಕಾ ಸಂಯುಕ್ತ ಸಂಸ್ಥಾನದ ಗಡಿಯಾಚೆಯಿಂದ ದೇಶಲ್ಲಿರುವ ಬ್ಯಾಂಕ್‌ ಖಾತೆಗಳಿಗೆ ಪಾವತಿಸಲಾದ ಹಣವು ಹಣ ಪಾವತಿಯಲ್ಲಿನ ದೋಷಗಳಾಗುವ ಸಮಸ್ಯೆ ಎದುರಿಸುವವು. ಕೆನಡಾ ದೇಶದ ಆರ್ಥಿಕ ಸಂಸ್ಥೆಗಳು ಐಬಿಎಎನ್‌ನ್ನು ಆಯ್ದುಕೊಂಡಿಲ್ಲ. ಬದಲಿಗೆ, ಕೆನಡಾ ದೇಶದೊಳಗೆ ಹಣ ವರ್ಗಾವಣೆಗಾಗಿ, ಕೆನಡಿಯನ್‌ ಪಾವತಿಗಳ ಸಂಘಟನೆ ನೀಡುವ ಬ್ಯಾಂಕ್‌ ವ್ಯವಹಾರ ಸಂಖ್ಯೆಗಳನ್ನು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಣ ವರ್ಗಾವಣೆಗಾಗಿ ಸ್ವಿಫ್ಟ್‌ ವಿಧಾನ ಬಳಸುತ್ತವೆ. ಪ್ರಮುಖ ಬ್ಯಾಂಕ್‌ಗಳು ಐಬಿಎಎನ್‌ ಬಳಸಲು ಕೆನಡಾದಲ್ಲಿ ಯಾವುದೇ ವಿಧ್ಯುಕ್ತ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದ ನಿಯಂತ್ರಣಾ ಷರತ್ತುಗಳಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜೀಲೆಂಡ್‌ ದೇಶಗಳ ಬ್ಯಾಂಕ್‌ಗಳೂ ಐಬಿಎಎನ್‌ ಅಳವಡಿಸಿಕೊಂಡಿಲ್ಲ. ಅವು ದೇಶೀಯ ಹಣ ವರ್ಗಾವಣೆಗಾಗಿ ಬ್ಯಾಂಕ್ ರಾಜ್ಯ ಶಾಖೆ ಸಂಖ್ಯೆ ಸಂಕೇತ ಹಾಗೂ ಅಂತಾರಾಷ್ಟ್ರೀಯ ಹಣ ವರ್ಗಾವಣೆಗಾಗಿ ಸ್ವಿಫ್ಟ್‌ನ್ನು ಬಳಸುತ್ತವೆ. == ಐಬಿಎಎನ್‌ ಊರ್ಜಿತಗೊಳಿಸುವಿಕೆಯ ಲಕ್ಷಣಗಳು == ದತ್ತಾಂಶವನ್ನು ಕಂಪ್ಯುಟರ್‌ಗೆ ಸೇರಿಸುವ ಸಮಯದಲ್ಲೇ, ಊರ್ಜಿತಗೊಳಿಸುವಿಕೆ ಕ್ರಮವನ್ನು ಆದಷ್ಟು ಸಕ್ರಿಯಗೊಳಿಸುವುದು. ಐಬಿಎಎನ್‌ನ ವಿನ್ಯಾಸ ಉದ್ದೇಶಗಳ ಪೈಕಿ ಒಂದೆನ್ನಲಾಗಿದೆ. ವಿಶಿಷ್ಟವಾಗಿ, ಐಬಿಎಎನ್‌ ಮಾಹಿತಿ ಸ್ವೀಕರಿಸುವ ಕಂಪ್ಯೂಟರ್‌ ತಂತ್ರಾಂಶವು ಇದನ್ನು ಊರ್ಜಿತಗೊಳಿಸಲು ಸಾಧ್ಯ: ದೇಶದ ನಿಯಮಾವಳಿಯು ಈ ಸಂಕೇತಕ್ಕೆ ಸಿಂಧುವಾಗಿದೆಯೇ? ಐಬಿಎಎನ್‌ನಲ್ಲಿರುವ ಸಂಕೇತಗಳು ಈ ದೇಶ ಕ್ಕೆ ಸೂಚಿಸಲಾದ ಸಂಖ್ಯೆಯೊಂದಿಗೆ ಹೊಂದಿಕೊಳ್ಳುತ್ತಿವೆಯೇ?(ಕೋಡ್ ಎಂದರೆ ಬ್ಯಾಂಕ್ ರಚಿಸಿದ ನಿಯಮಾವಳಿಗಳ ಸಂಕೇತ ರಚಿಸುವಿಕೆ) ಬಿಬಿಎಎನ್‌ ವ್ಯವಸ್ಥೆಯು ಈ ದೇಶ ಕ್ಕೆ ಸೂಚಿಸಲಾದ ನಿರ್ದಿಷ್ಟ ವ್ಯವಸ್ಥೆಯನ್ನು ಅನುಸರಿಸುತ್ತದೆಯೇ? ಖಾತೆ ಸಂಖ್ಯೆ, ಬ್ಯಾಂಕ್‌ (ನಿಯಮಾವಳಿಯ ಒಟ್ಟಾರ್ಥ) ಸಂಕೇತ ಮತ್ತು ದೇಶದ ಸಂಕೇತ ಸಂಯುಕ್ತವು ಪರಿಶೀಲನಾ ಅಂಕಿಗಳೊಂದಿಗೆ ಹೊಂದಿಕೊಳ್ಳುತ್ತದೆಯೇ? ಐಎಸ್‌ಒ/ಐಇಸಿ 7064:2002 (ಈ ಲೇಖನದಲ್ಲಿ ಎಂಒಡಿ-97 ಎಂದು ಹ್ರಸ್ವಗೊಳಿಸಲಾಗಿದೆ) ಪ್ರಮಾಣಗಳ ಪ್ರಕಾರ ಪರಿಶೀಲನಾ ಅಂಕಿಗಳನ್ನು ಗಣಿಸಲಾಗುವುದು. ಬಳಕೆದಾರರು ಮಾಹಿತಿಯನ್ನು ಕೀಲಿಮಣೆ ಮೂಲಕ ನಮೂದಿಸುವಾಗ ಅಥವಾ ನಕಲು ಮಾಡುವಾಗ ಸಂಭವಿಸಬಹುದಾದ ದೋಷಗಳಿಂದ ಇದು ಅಕ್ಷರ-ಅಂಶಗಳ ಜೋಡಣಾ ಸರಣಿಯನ್ನು ರಕ್ಷಿಸಲು ಪರಿಶೀಲನಾ ಅಕ್ಷರ ವ್ಯವಸ್ಥೆಯನ್ನು ಸೂಚಿಸುತ್ತದೆ. ವಿಶೇಷವಾಗಿ, ಈ ಪ್ರಮಾಣಕವು ಕೆಳಕಂಡವುಗಳನ್ನು ಪತ್ತೆ ಮಾಡಬಹುದೆಂದು ಹೇಳುತ್ತದೆ: "ಎಲ್ಲಾ ಏಕೈಕ ಬದಲೀ ದೋಷಗಳು (ಒಂದು ಅಕ್ಷರ-ಅಂಕಿಯ ಬದಲು ಇನ್ನೊಂದು, ಉದಾರಣೆಗೆ 1234 ಬದಲಿಗೆ 4234);" "ಎಲ್ಲಾ, ಅಥವಾ ಬಹುಶಃ ಎಲ್ಲಾ ಏಕ (ಸ್ಥಳೀಯ) ವರ್ಗಾವಣಾ ದೋಷಗಳು (ಎರಡು ಅಕ್ಕಪಕ್ಕದ ಅಥವಾ ಪರ್ಯಾಯ ಅಂಕಿಗಳ ಅದಲು-ಬದಲು;ಉದಾಹರಣೆಗೆ 12345 ಬದಲಿಗೆ 12354 ಅಥವಾ 12543);" ಏಕೆಂದರೆ ಐಬಿಎಎನ್‌ ದೋಷ ಪತ್ತೆಹಚ್ಚುವಿಕೆಯು ಸಾಮಾನ್ಯವಾಗಿ ಈ ವ್ಯವಸ್ಥೆಯು ಎಂಒಡಿ 97 ಬಳಸುವ ಕಾರಣ ಈ ತರಹದ ಎಲ್ಲಾ ದೋಷಗಳನ್ನು ಪತ್ತೆ ಮಾಡುತ್ತದೆ. ಎಲ್ಲಾ ಅಥವಾ ಬಹುತೇಕ ಸ್ಥಳಾಂತರಣಾ ದೋಷಗಳು (ಇಡೀ ಅಕ್ಷರ ಸರಣಿಯ ಎಡಕ್ಕೆ ಅಥವಾ ಬಲಕ್ಕೆ ಸ್ಥಳಾಂತರಣ);" ಸರಿಯಾದ ರಚನೆಯಿಲ್ಲದ ವ್ಯವಸ್ಥೆಯಲ್ಲಿ ಉಂಟಾಗುವ ಈ ದೋಷಗಳನ್ನು ಕಂಪ್ಯೂಟರ್‌ ತಂತ್ರಾಂಶ ಪತ್ತೆ ಮಾಡುತ್ತದೆ. "ಬಹಳಷ್ಟು ಪ್ರಮಾಣದಲ್ಲಿ ದುಪ್ಪಟ್ಟು ಅದಲು-ಬದಲು (ಪರ್ಯಾಯ)ದೋಷಗಳು (ಒಂದೇ ಅಕ್ಷರ-ಅಂಕಿ ಸರಣಿಯಲ್ಲಿ ಎರಡು ಪ್ರತ್ಯೇಕ ಅದಲು-ಬದಲು ದೋಷಗಳು, ಉದಾಹರಣೆಗೆ 1234567 ಬದಲು 7234587);" "ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುವ ಇತರೆ ಎಲ್ಲಾ ರೀತಿಯ ದೋಷಗಳು." == ಆನ್ಲೈನ್‌ (ಗಣಕಯಂತ್ರದ ಮೂಲಕ ಪರಿಶೀಲಿಸಬಲ್ಲ) ನೇರ ಸಾಧನಗಳು == === ಭದ್ರತೆ ಮತ್ತು ಗೌಪ್ಯತೆ === ಐಬಿಎಎನ್‌ ಎಂಬುದು ಬ್ಯಾಂಕ್‌ ಖಾತೆ ವರ್ಧಿತ ಸಂಖ್ಯೆಯಲ್ಲದೆ ಹೆಚ್ಚಿಗೇನೂ ಅಲ್ಲದ ಕಾರಣ, ಖಾತೆದಾರರು ಇತರೆ ಮಾಮೂಲಿ ಬ್ಯಾಂಕ್‌ ಖಾತೆ ಸಂಖ್ಯೆಗಳನ್ನು ನಿರ್ವಹಿಸುವಾಗ, ಭದ್ರತೆ-ಗೌಪ್ಯತೆಗಳ ಬಗ್ಗೆ ವಹಿಸುವ ಎಚ್ಚರಿಕೆಯನ್ನು ಇಲ್ಲೂ ವಹಿಸಬೇಕು. ಹಲವು ಉದ್ದಿಮೆಗಳು ತಮ್ಮ ಮಧ್ಯಂತರ ಖಾತೆ ಗಳ ಐಬಿಎಎನ್‌ಗಳನ್ನು ಪ್ರಕಟಿಸುತ್ತವೆ. ಭದ್ರತೆ ಕಾಪಾಡಲು, ಈ ಪಾವತಿಗಳನ್ನು ಆಗಾಗ್ಗೆ ಸಂಪೂರ್ಣವಾಗಿ ಖಾಲಿ ಮಾಡಿ ಉದ್ದಿಮೆಯ ಆಂತರಿಕ ಸಾಂಸ್ಥಿಕ ಖಾತೆಗೆ ಸ್ಥಳಾಂತರಿಸಲಾಗುವುದು. === ಆನ್ಲೈನ್ ಐಬಿಎಎನ್‌ ನ ಹೊಸ ಪೀಳಿಗೆಗಾಗಿ ನಡೆಸಿದ ಆವಿಷ್ಕಾರ,ಸೃಷ್ಟಿಸುವಿಕೆ === ಐಬಿಎನ್‌ಗಾಗಿ ಚಾಲ್ತಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ಖಾತೆ ನಿರ್ವಹಿಸುವ ಹಣಕಾಸು ಸಂಸ್ಥೆ ಮಾತ್ರ ಐಬಿಎಎನ್‌ ಪರವಾಗಿ ವಿತರಿಸುವ ಹಕ್ಕು ಪಡೆದಿದೆ. ಪರಿಶೀಲನಾ ಅಂಕಿಗಳು ಅಥವಾ ಸೃಷ್ಟಿಸಲಾದ ಐಬಿಎನ್‌ ವಿಚಾರದಲ್ಲಿ ಪರಿಶೀಲನಾ ಅಂಕಗಳು ಅಥವಾ ರವಾನಾ ಸಂಕೇತದಲ್ಲಿ ಕೆಲವು ನ್ಯೂನತೆಗಳಿರಬಹುದು ಎಂಬುದು ಹಲವು ಕಾರಣಗಳಲ್ಲಿ ಒಂದು. ಕೆಲವು ನಿದರ್ಶನಗಳಲ್ಲಿ, ಸಂಬಂಧಿತ ಸಂಸ್ಥೆಯು ತಮ್ಮ ಮಾಹಿತಿ ಪ್ರಕಟಿಸಲು ಅಂತರಜಾಲವನ್ನು ಬಳಸುವ ಸಾಧ್ಯತೆಯೂ ಉಂಟು. ಆನ್ಲೈನ್‌ ಐಬಿಎಎನ್ ಸೃಷ್ಟಿಸುವ ಸಾಧನವು ಸಂಬಂಧಿತ ಸಂಸ್ಥೆಯಿಂದ ಚಾಲಿತವಾಗಿರದಿದ್ದಲ್ಲಿ, ಬಳಕೆದಾರರು ಈ ಆನ್ಲೈನ್‌ ಸೃಷ್ಟಿಸುವ ಸಾಧನಗಳನ್ನು ವಿಶ್ವಸನೀಯ ಎನ್ನುವಂತಿಲ್ಲ. === ಆನ್ಲೈನ್‌ ಮೂಲಕ ಐಬಿಎಎನ್‌ ಊರ್ಜಿತಗೊಳಿಸುವಿಕೆ === ಅಂತರಜಾಲದಲ್ಲಿ ಬಹಳಷ್ಟು ಐಬಿಎಎನ್‌ ಊರ್ಜಿತಗೊಳಿಸುವ ಸಾಧನಗಳಿವೆ. ಕೆಲವು ಸಾಧನಗಳು ಒಂದೊಂದು ದೇಶಕ್ಕೆ ವಿಶಿಷ್ಟವಾಗಿವೆ. ಇನ್ನು ಕೆಲವು ನಿರ್ಧಿಷ್ಟ ಬ್ಯಾಂಕ್‌ಗೆ ಸಂಬಂಧಿಸಿವೆ. ಈ ಕೆಲವು ಸಂಸ್ಥೆಗಳಿಗೆ ಕೊಂಡಿಗಳನ್ನು ವಿಕಿಪೀಡಿಯಾದ ಪ್ರತ್ಯೇಕ ಲೇಖನಗಳಲ್ಲಿ ಸಂಬಂಧಿತ ಭಾಷೆಗಳಲ್ಲಿ ಲಭ್ಯ. ಎಲ್ಲಾ ಸಾಮಾನ್ಯ ಉದ್ದೇಶದ ಸಾಧನಗಳು ಮೇಲೆ ವಿವರಿಸಿದ ಊರ್ಜಿತಗೊಳಿಸುವ ಕಾರ್ಯ ಮಾಡುವವು. ಆದರೂ ಕೆಲವು ಇಂತಹ ದೇಶಕ್ಕೆ ಸಂಬಂಧಿತ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸುವುದುಂಟು - ಉದಾಹರಣೆಗೆ, ಐಬಿಎಎನ್ ಬ್ಯಾಂಕ್‌ ಸಂಕೇತ ಮತ್ತು ವಿಂಗಡಣಾ ಸಂಕೇತವು ಸುಸಂಗತವಾಗಿದೆಯೇ ಎಂಬುದನ್ನು ಪರಿಶೀಲಿಸುವುದು. ಐಬಿಎಎನ್‌ ವ್ಯವಸ್ಥೆಯನ್ನು ಆಯ್ದು ಜಾರಿಗೊಳಿಸಿದ ಎಲ್ಲಾ 50 ದೇಶಗಳಿಗಾಗಿ ಯುಎನ್‌ ಸಿಇಎಫ್‌ಎಸಿಟಿ ಟಿಬಿಜಿ5 ಉಚಿತ ಐಬಿಎಎನ್‌ ಊರ್ಜಿತಗೊಳಿಸುವಿಕೆಯ ಸಲಹಾ ಕೈಪಿಡಿ ಯನ್ನು 31 ಭಾಷೆಗಳಲ್ಲಿ ಪ್ರಕಟಿಸಿ ಹೊರತಂದಿದೆ. ಪರಿಶೀಲನಾ ಗಣನೆಯ ಜಾವಾಸ್ಕ್ರಿಪ್ಟ್‌ ಮೂಲ ಸಂಕೇತ ( ) 3 2010 ವೇಬ್ಯಾಕ್ ಮೆಷಿನ್ ನಲ್ಲಿ. ಸರಣಿಯನ್ನೂ ಸಹ ಪ್ರಕಟಿಸಿದೆ. ಇದೇ ರೀತಿ, ಇಸಿಬಿಎಸ್‌ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಲಭ್ಯವಿರುವ ಇಂಗ್ಲಿಷ್‌ ಭಾಷಾ ಐಬಿಎಎನ್‌ ಪರಿಶೀಲಿಸುವ ಸಾಧನವು ಅವುಗಳ ಅಂತರಜಾಲತಾಣ 22 2010 ವೇಬ್ಯಾಕ್ ಮೆಷಿನ್ ನಲ್ಲಿ. ದಲ್ಲಿ ಲಭ್ಯ. ಯಾವುದೋ(ನಕಲಿ) ಕೃತಕ ಬ್ರಿಟಿಷ್‌ ಐಬಿಎನ್‌ ಸಂಖ್ಯೆ GB82 1234 5698 7654 32 ನಮೂದಿಸಿದಾಗ, ಇವೆರಡೂ ಐಬಿಎಎನ್‌ ಪರಿಶೀಲನಾ ಸಾಧನಗಳು 'ಈ ಐಬಿಎಎನ್‌ ಸರಿಯಿದೆ ಎಂದು ಭಾಸವಾಗಿದೆ; (ಇದು ಸರಿಯೇ ಎಂದು, ಈ ತೆರನಾಗಿ ಇಂಗ್ಲಿಷ್ ನಲ್ಲಿ ಸಂದೇಶ ರವಾನೆಯಾಗುತ್ತದೆ)( ಐಬಿಎಎನ್‌ ) ' ಎಂಬ ಸಂದೇಶವನ್ನು ಕಾಣಿಸುತ್ತದೆ (ಮೇಲೆ ತಿಳಿಸಲಾದ ಮಾಹಿತಿ ನೋಡಿ). ಏಕೆಂದರೆ ಇದರಲ್ಲಿ ರಾಷ್ಟ್ರದ ಸಂಕೇತವು ಸಿಂಧುವಾಗಿತ್ತು. ರಾಷ್ಟ್ರದ ಸಂಕೇತದೊಡನೆ ಇರಬೇಕಾದ ವಿನ್ಯಾಸದೊಂದಿಗೆ ಇದು ಸುಸಂಗತವಾಗಿತ್ತು. ಪರಿಶೀಲನಾ ಅಂಕಗಳು ಐಬಿಎನ್‌ನ ಉಳಿದ ಭಾಗಗಳೊಂದಿಗೆ ಸುಸಂಗತವಾಗಿದ್ದವು. === ಆನ್ಲೈನ್‌ ಐಬಿಎಎನ್‌ ಊರ್ಜಿತಗೊಳಿಸುವಿಕೆಯು ಸುರಕ್ಷಿತವಾಗಿದೆಯೇ? === ಅಪ್ಪಟ ಐಬಿಎಎನ್‌ ಊರ್ಜಿತಗೊಳಿಸುವಿಕೆಯ ಸಾಧನಗಳಿಗೆ ಅಂತರಜಾಲ ಕೊಂಡಿಗಳನ್ನು ಅಳಿಸಿ ಅನ್ಯ ಕೊಂಡಿಗಳನ್ನು ಸೇರಿಸುವುದರಿಂದ, ಅಪರಾಧಿಗಳು ನೈಜ ಐಬಿಎನ್‌ಗಳ ಕಳ್ಳತನ ಕೃತ್ಯ (ದುರ್ಬಳಕೆ)ಎಸಗುವುದು ಸುಲಭವಾಗುವುದು ಎಂದು ವಿಮರ್ಶಾ ತಜ್ಞರು ಎಚ್ಚರಿಸಿದ್ದಾರೆ. == ವಿವಿಧ ದೇಶಗಳಲ್ಲಿ ಸಿಂಧುವಾಗಿರುವ ಐಬಿಎಎನ್‌ಗಳ ಪಟ್ಟಿ == ಈ ಪಟ್ಟಿಯು ವಿವಿಧ ದೇಶಗಳ ಐಬಿಎಎನ್‌ ವ್ಯವಸ್ಥೆಗಳ ಸಂಕ್ಷಿಪ್ತ ವಿವರಗಳನ್ನು ನೀಡುತ್ತದೆ. ಅನ್ಯಥಾ ತಿಳಿಸದಿದ್ದಲ್ಲಿ, ಐಬಿಎಎನ್‌ ದಾಖಲೆಗಳ ಆಗಸ್ಟ್‌ 2010 ಆವೃತ್ತಿಯಿಂದ ಈ ಮಾಹಿತಿಯನ್ನು ಆಯ್ದುಕೊಳ್ಳಲಾಗಿದೆ. ಎರಡು ಅಕ್ಷರಗಳ ಐಎಸ್‌ಒ ದೇಶದ ಸಂಕೇತದ ನಂತರ ಬರುವ ಎಂಬುದನ್ನು ಉಳಿದ ಐಬಿಎಎನ್‌ ಅಕ್ಷರಗಳಿಂದ ಗಣಿಸಲಾದ ಪರಿಶೀಲನಾ ಅಂಕಗಳನ್ನು ನಿರೂಪಿಸುತ್ತದೆ. ಸಂಭಂದಿತ ದೇಶದೊಂದಿಗೆ ಇದು ಸ್ಥಿರ ಮೌಲ್ಯವಾಗಿದ್ದಲ್ಲಿ, ಇದನ್ನು ಟಿಪ್ಪಣಿಗಳ ಅಂಕಣದಲ್ಲಿ ನಮೂದಿಸಲಾಗುವುದು. ಬಿಬಿಎಎನ್‌ ತನ್ನದೇ ಪರಿಶೀಲನಾ ಅಂಕಗಳನ್ನು ಹೊಂದಿದ್ದು, ಐಬಿಎಎನ್‌ ಪರಿಶೀಲನಾ ಅಂಕಗಳ ತರಹ ಅದೇ ಗಣನಾ ವಿಧಾನವನ್ನು ಬಳಸಿದಲ್ಲಿ, ಇದು ಸಂಭವಿಸುತ್ತದೆ. ಬಿಬಿಎಎನ್‌ ವ್ಯವಸ್ಥೆಯ ಅಂಕಣವು ಐಬಿಎಎನ್‌ನ ಬಿಬಿಎಎನ್‌ ಭಾಗದ ವ್ಯವಸ್ಥೆಯನ್ನು ಇಂಗ್ಲಿಷ್‌ ದೊಡ್ಡಕ್ಷರಗಳು (-), ಸಂಖ್ಯೆಗಳು (0-9) ಹಾಗೂ ಮಿಶ್ರಿತ ಅಕ್ಷರಗಳು (-, -, 0-9) ರೂಪದಲ್ಲಿ ಪ್ರದರ್ಶಿಸುತ್ತವೆ. ಉದಾಹರಣೆಗೆ, ಬಲ್ಗೇರಿಯಾ ದೇಶದ ಬಿಬಿಎಎನ್ (4a,6n,8c) ನಲ್ಲಿ ನಾಲ್ಕು ಆಲ್ಫಾ ಅಕ್ಷರಗಳು, ನಂತರ ಆರು ಅಂಕಿಗಳು, ನಂತರ ಎಂಟು ಮಿಶ್ರಿತ ಅಕ್ಷರ-ಅಂಕಿಗಳ ಸಂಯುಕ್ತ ಮಾಹಿತಿ ಹೊಂದಿರುತ್ತವೆ. ಆವರಣಗಳಲ್ಲಿ ದೇಶ-ವಿಶಿಷ್ಟ ಹೆಸರುಗಳೊಂದಿಗೆ ಟಿಪ್ಪಣಿಗಳು ಅಂಕಣದಲ್ಲಿ ವಿವರಣೆ ನೀಡಲಾಗಿದೆ. ವಿವಿಧ ಪಂಕ್ತಿಗಳಲ್ಲಿನ ವ್ಯವಸ್ಥೆಗಳನ್ನು ಬಿಬಿಎಎನ್‌ ಪಂಕ್ತಿಯಿಂದ ನಿರ್ಣಯಿಸಬಹುದಾಗಿದೆ. === ಟಿಪ್ಪಣಿಗಳು === == ಗಣನೆಗಳು == === ಐಬಿಎಎನ್‌ ಊರ್ಜಿತಗೊಳಿಸುವಿಕೆ === ಐಬಿಎಎನ್‌ ಊರ್ಜಿತಗೊಳಿಸುವಿಕೆಯ ಆಧಾರವೇನೆಂದರೆ, ಐಬಿಎಎನ್‌ನ್ನು ಸಂಖ್ಯೆಯಾಗಿ ಪರಿವರ್ತಿಸಿ, ನಂತರ ಐಎಸ್‌ಒ-7064ರಲ್ಲಿ ವಿವರಿಸಿದಂತೆ ಮೂಲಭೂತ ಎಮ್‌ಒಡಿ-97 ಗಣನೆ ಮಾಡುವುದು. ಐಬಿಎನ್‌ ಸಿಂಧುವಾಗಿದ್ದಲ್ಲಿ, ದೊರೆತ ಬಾಕಿ ಸಂಖ್ಯೆ 1ಕ್ಕೆ ಸಮನಾಗಿರುತ್ತದೆ. ಐಬಿಎಎನ್‌ ಊರ್ಜಿತಗೊಳಿಸುವಿಕೆಯ ವಿಧಾನ ಹೀಗಿದೆ: ಆ ದೇಶದ ನಿಯಮಗಳಂತೆ, ಐಬಿಎಎನ್‌ನ ಒಟ್ಟು‌ ಅಂಕಿಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದಲ್ಲಿ, ಐಬಿಎಎನ್‌ ಅಸಿಂಧುವಾಗಿರುವುದು. ಮೊದಲ ನಾಲ್ಕು ಅಕ್ಷರ-ಅಂಕಿಗಳನ್ನು ಆ ಸರಣಿಯ ಕೊನೆಗೆ ಸರಿಸಿ. ಸರಣಿಯ ಪ್ರತಿಯೊಂದು ಅಕ್ಷರದ ಸ್ಥಳದಲ್ಲಿ ಎರಡು ಅಂಕಿಗಳನ್ನು ಸೇರಿಸಿ, ಸರಣಿಯನ್ನು ಹಿಗ್ಗಿಸಿ. ಉದಾಹರಣೆಗೆ, =10, =11, ..., =35. ಈ ಸರಣಿಯನ್ನು ದಶಮಾಂಶದ ಸಂಖ್ಯೆ ಎಂದು ವ್ಯಾಖ್ಯಾನಿಸಿ, 97ರಿಂದ ಆ ಸಂಖ್ಯೆಯನ್ನು ಭಾಗಿಸಿದಾಗ ದೊರೆತ ಬಾಕಿಯನ್ನು ಗಣಿಸಿ. ಬಾಕಿಯು 1 ಆಗಿದ್ದಲ್ಲಿ, ಪರಿಶೀಲನಾ ಅಂಕಿಗಳ ಪರೀಕ್ಷೆಯು ಸಫಲವಾಗಿ, ಐಬಿಎಎನ್‌ ಸಂಖ್ಯೆಯು ಸಿಂಧುವಾಗಿದೆ ಎನ್ನಬಹುದು. ಉದಾಹರಣೆಗೆ, (ಯುನೈಟೆಡ್‌ ಕಿಂಗ್ಡಮ್‌ನಲ್ಲಿರುವ ಯಾವುದೋ ಒಂದು ಕಾಲ್ಪನಿಕ ಬ್ಯಾಂಕ್‌, ವಿಂಗಡಣ ಸಂಕೇತ 12-34-56, ಖಾತೆ 98765432): ಐಬಿಎಎನ್‌: GB82 1234 5698 7654 32 ಪುನಃ ಜೋಡಿಸಿದಾಗ: T12345698765432 B82 ಮಾಡ್ಯುಲಸ್‌: 3214282912345698765432161182 97 = 1 === ಐಬಿಎಎನ್‌ ಪರಿಶೀಲನಾ ಅಂಕಿಗಳನ್ನು ಸೃಷ್ಟಿಸುವ ವಿಧಾನ === ಯುರೋಪಿಯನ್‌ ಬ್ಯಾಂಕಿಂಗ್‌ ಪ್ರಮಾಣಕ ಸಮಿತಿಯ (ಇಸಿಬಿಎಸ್‌) ಪ್ರಕಾರ, 'ಐಬಿಎನ್‌ ಸಂಖ್ಯೆ ಸೃಷ್ಟಿಯು ಈ ಖಾತೆಯ ಸೇವೆ ಒದಗಿಸುವ ಬ್ಯಾಂಕ್‌ ಮತ್ತು ಅದರ ಶಾಖೆಯ ವಿಶಿಷ್ಟ ಹೊಣೆಯಾಗಿದೆ.' 02ರಿಂದ 98ರ ತನಕದ ಶ್ರೇಣಿಯಲ್ಲಿ ಪರಿಶೀಲನಾ ಅಂಕಗಳನ್ನು ಸೃಷ್ಟಿಸಲು ಇಸಿಬಿಎಸ್‌ ಒಂದು ವಿಧಾನ ಒದಗಿಸುತ್ತದೆ. ಸೈದ್ಧಾಂತಿಕವಾಗಿ, 00ಯಿಂದ 96, 01ರಿಂದ 97 ಹಾಗೂ 03ರಿಂದ 99ರ ತನಕ ಪರಿಶೀಲನಾ ಅಂಕಗಳನ್ನು ಸೃಷ್ಟಿಸುವುದು ಸುಲಭ. ಆದರೆ ಈ ಶ್ರೇಣಿಗಳನ್ನು ಬಳಸಲು ಅನುಮತಿಯಿದೆಯೇ ಎಂಬುದರ ಕುರಿತು ಪ್ರಮಾಣಕಗಳು/ನಿಯಮಾವಳಿಗಳು ಏನನ್ನು ಸ್ಪಷ್ಟಗೊಳಿಸಿಲ್ಲ. ರೂಢಿಯಲ್ಲಿರುವ ಗಣನೆಯು ಹೀಗಿದೆ: ಆಯಾ ದೇಶದ ಪ್ರಕಾರ, ಐಬಿಎಎನ್‌ನ ಅಕ್ಷರ-ಅಂಕಿಗಳ ಒಟ್ಟು ಸಂಖ್ಯೆಗಳು ಸರಿಯಿದೆಯೇ ಪರಿಶೀಲಿಸಿ. ಸರಿಯಿಲ್ಲದಿದ್ದಲ್ಲಿ, ಐಬಿಎಎನ್‌ ಅಸಿಂಧುವಾಗಿರುವುದು. ಎರಡೂ ಪರಿಶೀಲನಾ ಅಂಕಗಳ ಸ್ಥಳದಲ್ಲಿ 00 ಸೇರಿಸಿ. (ಉದಾಹರಣೆಗೆ, ಯುಕೆಗಾಗಿ GB00). ಮೊದಲ ನಾಲ್ಕು ಅಕ್ಷರಗಳನ್ನು ಸರಣಿಯ ಅಂತ್ಯಕ್ಕೆ ಸರಿಸಿ. ಸರಣಿಯಲ್ಲಿರುವ ಅಕ್ಷರಗಳ ಸ್ಥಳದಲ್ಲಿ ಅಂಕಿಗಳನ್ನು ನಮೂದಿಸಿ. ಅಗತ್ಯವಿದ್ದಲ್ಲಿ, ಅಥವಾ =10, ಅಥವಾ =11 ಅಥವಾ =35 ಎಂದಾಗುವಂತೆ ಸರಣಿಯನ್ನು ಹಿಗ್ಗಿಸಬಹುದಾಗಿದೆ. ಇದೇ ರೀತಿಯಲ್ಲಿ ಪ್ರತಿಯೊಂದು ಅಕ್ಷರದ ಸ್ಥಳದಲ್ಲಿ ಎರಡು ಅಂಕಿಗಳನ್ನು ಸೇರಿಸಬಹುದು. ಪೂರ್ವಪ್ರತ್ಯಯದ ಸೊನ್ನೆಗಳನ್ನು ಕಡೆಗಣಿಸಿ, ಸರಣಿಯನ್ನು ಅಂಕಿರೂಪಕ್ಕೆ ಬದಲಿಸಿ. ಈ ಹೊಸ ಸಂಖ್ಯೆಯ -97 ಗಣಿಸಿ. ಇದರಲ್ಲಿ ದೊರೆಯುವ ಶೇಷವನ್ನು 98ರಿಂದ ಕಳೆಯಿರಿ. ಅಗತ್ಯವಿದ್ದಲ್ಲಿ, ಈ ಸಂಖ್ಯೆಗೆ '0'ಯನ್ನು ಪೂರ್ವಪ್ರತ್ಯಯದ ರೂಪದಲ್ಲಿ ಸೇರಿಸಿ. === ದೊಡ್ಡ ಸಂಖ್ಯೆಯ(ಪರಿಮಾಣ) ಮಾಡ್ಯುಲಸ್‌ ಗಣಿಸುವ ವಿಧಾನ: === ಇಂತಹ ಗಣನೆಗಳನ್ನು ಆಧುನಿಕ ಪಿಸಿಯಲ್ಲಿ(ವೈಯಕ್ತಿಕ ಕಂಪ್ಯುಟರ್ ನಲ್ಲಿ) ನೇರವಾಗಿ ಮಾಡುವುದು ಅಪ್ರಾಯೋಗಿಕ ಎಂದು ಹೇಳಲಾಗಿದೆ. ಆದ್ದರಿಂದ, ಯುಎನ್‌ ಸಿಇಎಫ್‌ಎಸಿಟಿ ಟಿಬಿಜಿ5 ಪ್ರಕಟಿಸಿದ ಜಾವಾಸ್ಕ್ರಿಪ್ಟ್‌ ತಂತ್ರಾಂಶ 3 2010 ವೇಬ್ಯಾಕ್ ಮೆಷಿನ್ ನಲ್ಲಿ. ವು ಹಂತ-ಹಂತದ ಯತ್ನದ ಮೂಲಕ ಗಣನೆ ಮಾಡುತ್ತವೆ. ಮಾಡ್ಯುಲರ್‌ ಅಂಕಗಣಿತ ಅನನ್ಯತೆಯ ಗುರುತುಗಳ ಬಳಸುವ ಮೂಲಕ ಇವನ್ನು ಗಣಿಸುತ್ತವೆ. ( + ) ≡ ( ( ( ) ) + ( ( ) ) ) {\ \({+}\){\ {}}\ \({\({\(\){\ {}}}\)+\({\(\){\ {}}}\)}\){\ {}}} ಹಾಗೂ ( × ) ≡ ( ( ( ) ) × ( ( ) ) ) {\ \({\ }\){\ {}}\ \({\({\(\){\ {}}}\)\ \({\(\){\ {}}}\)}\){\ {}}} ಐಬಿಎಎನ್‌ನಂತಹ ದೊಡ್ಡ ಸಂಖ್ಯೆ {\ } ಯ ಮೇಲೆ ಮಾಡ್ಯುಲಸ್‌ ಗಣನೆಯನ್ನು ಈ ರೀತಿ ಪುನಃ ಗಣಿಸಬಹುದಾಗಿದೆ. ( ) = ( ∑ = 1 × ) {\ \(\){\ {}}=\({\ \ _{=1}^{}{d_{}\ a_{}}}\){\ {}}} , ಇದರಲ್ಲಿ {\ d_{}} ಎಂಬುದು {\ } ನ ಅಂಕಿಗಳಾಗಿವೆ (ಅಂದರೆ, 0 ಮತ್ತು 9ರ ನಡುವಿನ ಅಂಕಿ ಮೌಲ್ಯಗಳು) = ∑ = 1 × 10 ( − 1 ) {\ =\ \ _{=1}^{}{d_{}\ 10^{(-1)}}} , ಹಾಗೂ {\ a_{}} ಎಂಬುದು ಗೆ ಯಾವುದೇ ಅವಲಂಬನೆಯಿಲ್ಲದ ಅಂಕಿಗಳ ನಿಶ್ಚಿತ ಸರಣಿಯಾಗಿದೆ. = ( 10 ( − 1 ) ) {\ a_{}=\({10^{(-1)}}\){\ {}}} . ಪುನರಾವೃತ್ತಿಯ ಸಂಬಂಧವನ್ನು ಬಳಸುವ ಮೂಲಕ { | = 1 … } {\ \\{{a_{}\|{=1\ }\.}\\}} ಸರಣಿಯನ್ನು ಸುಲಭವಾಗಿ ಸೃಷ್ಟಿಸಬಹುದು. 1 = 1 ; + 1 = ( × 10 ) {\ a_{1}=1;\ a_{+1}=\({a_{}\ 10}\){\ {}}} . ಈ ವಿಧಾನವನ್ನು ಅನುಸರಿಸಿದಲ್ಲಿ ಈ ಗಣನೆಯು ಬಹು ಉಪಯುಕ್ತವಾಗುವುದು: ದೊಡ್ಡ ಸಂಖ್ಯೆ {\ } ಯನ್ನು ಎಎಸ್‌ಸಿಐಐ ಸರಣಿಯ ರೂಪದಲ್ಲಿ ನಮೂದಿಸಿ, ದ್ವಿಮಾನ ಸಂಖ್ಯೆಯ ಬದಲಿಗೆ {\ d_{}} ರೂಪದಲ್ಲಿ ಅಂಶಗಳನ್ನು ಹೊರಸೆಳೆಯಬಹುದು. ಪ್ರಾಯೋಗಿಕವಾಗಿ, ಸ್ವತಃ {\ } 30 ಅಂಕಿಗಳಿಗಿಂತಲೂ ಹೆಚ್ಚು ಉದ್ದವಿದ್ದಲ್ಲಿ, ಈ ಗಣನೆಯನ್ನು 16-ಬಿಟ್‌ ಅಂಕಿ ಅಂಕಗಣಿತವನ್ನು ಬಳಸಿ ನಡೆಸಬಹುದಾಗಿದೆ. === ಮಾಡ್ಯುಲಸ್‌ ಗಣನೆಯ ಉದಾಹರಣೆಗಳು === ಈ ಉದಾಹರಣೆಯಲ್ಲಿ, ಮಾಡ್ಯುಲರ್ ಅಂಕಗಣಿತ ಬಳಸಿ (3214282912345698765432161182 97 ) ಗಣನೆಯನ್ನು ವಿಸ್ತೃತವಾಗಿ ವಿವರಿಸಲಾಗಿದೆ. ಈ ಗಣನೆಯ ಲಬ್ಧವು 1 ಆಗಿದ್ದಲ್ಲಿ, ಐಬಿಎಎನ್‌ ಪರಿಶೀಲನಾ ಅಂಕಿ ಪರೀಕ್ಷೆ ಸಫಲವಾದಂತೆ. ಸ್ಪಷ್ಟನೆಗಾಗಿ, ಐಬಿಎಎನ್‌ ಅಂಕಿಗಳನ್ನು ಮೇಲೆ ಬಣ್ಣದ ಅಕ್ಷರದಲ್ಲಿ ಸೂಚಿಸಲಾಗಿದೆ. ಕೆಳಗಿನ ಪಟ್ಟಿಯಲ್ಲಿ ಅಂಕಣದಲ್ಲಿರುವುದು ಬಲದಿಂದ ಎಡಕ್ಕೆ ಎಣಿಸಲಾದ ಅಂಕಿಗಳು. ಅಂಕಣದಲ್ಲಿರುವುದು ಈ ಅಂಕಿಗಳ ಮೌಲ್ಯಗಳು. ಅಂಕಣದಲ್ಲಿರುವುದು ಹಂತಹಂತವಾದ ಮೌಲ್ಯಗಳು. ಇವನ್ನು = (10 -1 ) 97 ಇದರಂತೆ ಗಣಿಸಲಾಗಿದೆ. ಇದರಲ್ಲಿ a1 = 1. ಅಂಕಣ × ಅದೇ ವಿವರಿಸುವಂತಿದೆ. ವ್ಯಾಖ್ಯಾನ ಹಾಗೂ ಗಣನೆ ಇವರಡೂ ಅಂಕಣಗಳು ಹೇಗೆ ಗಣಿಸಲಾಗುತ್ತದೆ ಎಂಬುದನ್ನು ವಿವರಿಸುತ್ತವೆ. ಮೌಲ್ಯಗಳು ಪರಿಶೀಲಿಸಲಾದ ಐಬಿಎಎನ್‌ನ್ನು ಅವಲಂಬಿಸಿರುವುದಿಲ್ಲ, ಅರ್ಥಾತ್‌ ಅವು ನಿರ್ದಿಷ್ಟ ಉದ್ದನೆಯ ಐಬಿಎನ್‌ಗಳ ಮೇಲೆ ನಡೆಸಲಾದ ಪರಿಶೀಲನಾ ಅಂಕಿ ಪರೀಕ್ಷೆಗಳಿಗಾಗಿ ಸರಣಿ ರಚಿಸುತ್ತವೆ. ಒಂದು ಪಂಕ್ತಿಯಿಂದ ಇನ್ನೊಂದಕ್ಕೆ ರ ಮೌಲ್ಯಗಳು ವರ್ಧಿಸುವುದನ್ನು ತೋರಿಸಲು 27 ಮೌಲ್ಯವನ್ನು ಎದ್ದುಕಾಣುವಂತೆ ಸೂಚಿಸಲಾಗಿದೆ. × ಅಂಕಣದಲ್ಲಿರುವ ಮೌಲ್ಯಗಳ ಮೊತ್ತದ -97 ಮೊತ್ತವು 1 ಆಗಿದೆಯೆಂದು ಪರಿಶೀಲಿಸುವುದರೊಂದಿಗೆ ಕೊನೆಯ ಎರಡು ಪಂಕ್ತಿಗಳು ಗಣನೆಯನ್ನು ಸಂಪೂರ್ಣಗೊಳಿಸುತ್ತವೆ. ಈ ಗಣನೆಯಲ್ಲಿ 4560 ಅತಿದೊಡ್ಡ ಸಂಖ್ಯೆಯಾಗಿದ್ದು, 16-ಬಿಟ್‌ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳಬಹುದು ಎಂಬುದನ್ನು ಗಮನಿಸಿ. == ಟಿಪ್ಪಣಿಗಳು ಮತ್ತು ಆಕರಗಳು == == ಇವನ್ನೂ ಗಮನಿಸಿ == ಬ್ಯಾಂಕ್‌ ಖಾತೆ ಬ್ಯಾಂಕ್ ಕಾರ್ಡ್ ಸಂಖ್ಯೆ ಬ್ಯಾಂಕ್‌ ನಿಯಂತ್ರಣ 9000 ಏಕೈಕ ಯುರೋ ಪಾವತಿ ಪ್ರದೇಶ == ಬಾಹ್ಯ ಕೊಂಡಿಗಳು == ಅಧಿಕೃತ ಐಎಸ್‌ಒ 13616 ನೋಂದಣಿ ಕಛೇರಿ 31 2010 ವೇಬ್ಯಾಕ್ ಮೆಷಿನ್ ನಲ್ಲಿ. ಐಎಸ್ಒ 13616-1:2007 ಬ್ಯಾಂಕಿಂಗ್‌ ಪ್ರಮಾಣಿತಗಳ ಯುರೋಪಿಯನ್‌ ಸಮಿತಿಯ ಐಬಿಎಎನ್‌ ಅಂತರಜಾಲ ಪುಟ 15 2010 ವೇಬ್ಯಾಕ್ ಮೆಷಿನ್ ನಲ್ಲಿ.